ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್‌ ಟು ಗಾಡ್ ಹೆಡ್‌ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್‌ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.

ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

  • ಧರ್ಮದ ನೆಲೆ

    ಗುರು-ಮುಖ-ಪದ್ಮ-ವಾಕ್ಯ

    ಧರ್ಮದ ನೆಲೆ

    ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ. ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ…


ಸುದ್ದಿಮನೆ

  • ಮೃದುಲ ಮಾತೆ

    ಮೃದುಲ ಮಾತೆ

    ಭಾರತೀಯ ಹಳ್ಳಿಗರಿಗೆ, ತಮ್ಮ ಕೃಷಿ ಜೀವನದಲ್ಲಿ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗ. ಆತ ತನ್ನ ಎಲ್ಲ ಅವಶ್ಯಕತೆಗಳಿಗೂ ನಿಸರ್ಗದ ಕೊಡುಗೆ ಉಪಯೋಗಿಸಿ, ಮಣ್ಣಿನ ಗುಡಿಸಲಿನಿಂದ ಹಿಡಿದು ಆತನ ಕರಮಗ್ಗದ ಬಟ್ಟೆಯವರೆಗೂ, ತಯಾರಿಸಿಕೊಳ್ಳುವಲ್ಲಿ ಸಿದ್ಧಹಸ್ತ ಮತ್ತು ಗ್ರಾಮ ರಕ್ಷಣೆ ಕಾಯಕದಲ್ಲಿ ಗೋವುಗಳನ್ನು ಸಂರಕ್ಷಿಸುವುದು ಯಾವಾಗಲೂ ಬಹು ಮಹತ್ವದ ವಿಷಯವಾಗಿದೆ. ಜನಸಂಖ್ಯೆಯ ಪ್ರತಿಶತ 80ರಷ್ಟು ಮಂದಿ ವಾಸಿಸುವ ಗ್ರಾಮಗಳ ಪ್ರತಿಯೊಂದು ಮನೆಯಲ್ಲಿ ಗೋವು ಮತ್ತು ಎತ್ತುಗಳು ಅತ್ಯಗತ್ಯ. ಹಸುಗಳು, ಹುಲ್ಲನ್ನು ತಿಂದು ನಮ್ಮ ಶರೀರಕ್ಕೆ…


  • ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿ
    ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿ

    ಶ್ರೀ ಚೈತನ್ಯ ಮಹಾಪ್ರಭುಗಳ ಪರಮಾಪ್ತ ಸೇವಕರು ಮತ್ತು ಅಪ್ರತಿಮ ವಿದ್ವಾಂಸರು ‍ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು ಅಲೌಕಿಕ ಗುಣಗಳ ಗಣಿಯಾಗಿದ್ದಾರೆ. ಚೈತನ್ಯ ಮಹಾಪ್ರಭುಗಳ ಅವತಾರ ಕಾಲದಲ್ಲಿನ ಅವರ ದಿನಚರಿಯನ್ನು ವಿವರವಾಗಿ ದಾಖಲಿಸಿದ ಮಹನೀಯರೇ ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು. ಶ್ರೀ ಚೈತನ್ಯ ಮಹಾಪ್ರಭುಗಳು ಪರಂಪರೆಗೆ ಇದವರ ಮಹತ್ತರ ಕೊಡುಗೆ. ಚೈತನ್ಯ ಮಹಾಪ್ರಭುಗಳು ಪುಣ್ಯ ಚರಿತ್ರೆಯ ಚಾರಿತ್ರಿಕ ಸ್ತೋತ್ರಗಳೆಂದರೆ ಶ್ರೀ ಮುರಾರಿ ಗುಪ್ತ ಮತ್ತು ಸ್ವರೂಪ ದಾಮೋದರ ಗೋಸ್ವಾಮಿಗಳು ನಿರ್ವಹಿಸಿದ ಕಡತಗಳೆಂದು ಕರೆಯುವ ದಿನಚರಿ (ಡೈರಿ)ಗಳಾಗಿವೆ. ಮಹಾಪ್ರಭುಗಳ ಸಂನ್ಯಾಸ…


  • ನರಸಿಂಹಾವತಾರ
    ನರಸಿಂಹಾವತಾರ

    ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ಸಮಾಗಮ ಸಹಸ್ರಾರು ವರ್ಷಗಳ ಹಿಂದೆ ನರಸಿಂಹನ ರೂಪದಲ್ಲಿ ಅವತರಿಸಿದ ಭಗವಂತನು ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ನಡುವಿನ ಸಂಬಂಧವನ್ನು ಜಗತ್ತಿಗೆ ನಿರೂಪಿಸಿದ. ಅದು ನಿಜಕ್ಕೂ ಉಗ್ರ ಸೌಂದರ್ಯ; ರುದ್ರ ರಮಣೀಯ ನೋಟ. ಕೋಪದ ಬೆಂಕಿಯುಗುಳುತ್ತಿರುವ ಕೆಂಪು ಕಣ್ಣುಗಳು. ಅರ್ಧ ಮನುಷ್ಯ; ಇನ್ನರ್ಧ ಸಿಂಹದ ಶರೀರ ಎಲ್ಲ ದಿಕ್ಕುಗಳಿಗೂ ಚಾಚಿಕೊಂಡಿರುವ ಬಲಿಷ್ಠ ಬಾಹುಗಳು. ಶಿರದ ಮೇಲೆ ನೆರಳಿನಂತೆ ನಿಂತು ಬುಸುಗುಡುತ್ತಿರುವ ಅಸಂಖ್ಯಾತ ಹೆಡೆಗಳ ಸರ್ಪ. ಅದೊಂದು ದೈತ್ಯ ದೇಹ. ಅವನೇ…


  • ಜನನ ಮರಣಗಳಾಚೆ
    ಜನನ ಮರಣಗಳಾಚೆ

    -ಡಾ|| ಸಿ. ಅನ್ನಪೂರ್ಣಮ್ಮ ವಿಜ್ಞಾನ ಮತ್ತು ವೇದಾಂತ- ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನಿಯು ಬ್ರಹ್ಮಾಂಡದ, ಚರಾಚರ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳನ್ನು ಕುರಿತು ಆಳವಾದ ಸಂಶೋಧನೆ ಮಾಡಿ ಒಂದು ನಿರ್ಧಾರಿತ ಸತ್ಯದ ಅರಿವನ್ನು ಪಡೆಯುತ್ತಾನೆ, ನಿಜ. ಆದರೆ ಬ್ರಹ್ಮಾಂಡದ ಆಚೆಗಿರುವ ಮುಂದಿನ ವ್ಯೋಮವನ್ನು ಕುರಿತು ಆತ ಏನನ್ನೂ ಹೇಳಲಾರ. ವಾಸ್ತವದಲ್ಲಿ ವೇದಾಂತದ ಆರಂಭ ಇಲ್ಲಿಂದಲೇ ಆಗುತ್ತದೆ. ಅಂದರೆ, ವಿಜ್ಞಾನದ ಎಲ್ಲೆಯಲ್ಲಿ ಆರಂಭಗೊಂಡು, ಮುಂದಿನ ಸ್ಥೂಲ-ಸೂಕ್ಷ್ಮಗಳ ಎಳೆ ಎಳೆಗಳನ್ನು ಬಿಡಿಸಿ ಮತ್ತೊಂದು ವಿಶಾಲ ಬ್ರಹ್ಮಾಂಡಕ್ಕೆ ವೇದಾಂತ ಆಹಾರ ಒದಗಿಸುತ್ತದೆ.…


  • ಮೊದಲು ಅರ್ಹತೆ, ಬಳಿಕ ಅಪೇಕ್ಷೆ
    ಮೊದಲು ಅರ್ಹತೆ, ಬಳಿಕ ಅಪೇಕ್ಷೆ

    ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಸಂವಾದ, ಸ್ಥಳ: ಡೆನ್‌ವರ್‌, ಜುಲೈ 1975 ಶ್ರೀಲ ಪ್ರಭುಪಾದ : ನಮ್ಮ ಈ ದೇಹ ಒಂದು ಯಂತ್ರವಲ್ಲದೆ ಬೇರೇನೂ ಅಲ್ಲ ಎಂಬ ಕಲ್ಪನೆಯನ್ನು ನಿನ್ನೆಯ ಮಾತುಕತೆಯಲ್ಲಿ ಮುಂದಿಟ್ಟಿರಿ. ಈ ಅಭಿಪ್ರಾಯವನ್ನು ನಾವೂ ಒಪ್ಪುತ್ತೇವೆ. ಯಂತ್ರಾರೂಢಾನಿ ಎಂಬ ಮಾತು ಭಗವದ್ಗೀತೆಯಲ್ಲಿ ಬಂದಿದೆ. ”ಈ ದೇಹವೆಂಬುದು ಒಂದು ಯಂತ್ರ.” ಯಂತ್ರ ಎಂಬ ಪದಕ್ಕೆ ಒಂದು ಉಪಕರಣ ಎಂದು ಅರ್ಥ ಹೇಳಬಹುದು. ಅದೇ ಮಾತಿನ ವೇಳೆ ನೀವು ಈ ದೇಹ ಬೆಳೆಯುತ್ತಿದೆಯೆಂದೂ ಹೇಳಿದಿರಿ. ಕಾರ್‌ನಂಥ…


ಮಕ್ಕಳ ಕಥೆ

  • ಆಡಿಸಿದಳೆಶೋದೆ ಕೃಷ್ಣನ
    ಆಡಿಸಿದಳೆಶೋದೆ ಕೃಷ್ಣನ

    ಯಾವಾಗಲೋ ಒಂದು ಸಲ, ತನ್ನ ಮನೆಸೇವಕಿ ಬೇರೆಬೇರೆ ಮನೆಯ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿದ ಯಶೋದಾ ತಾನೇ ಬೆಣ್ಣೆ ಕಡಿಯುವ ಕೆಲಸಕ್ಕೆ ಇಳಿದಳು. ಶ್ರೀ‍ಕೃಷ್ಣನಿಗೆ ತುಂಬಾ ಹಸಿವಾಗಿತ್ತು. ಹಾಗಾಗಿ ಮೊದಲು ತನಗೆ ಎದೆಹಾಲು ಕೊಟ್ಟು, ಆಮೇಲೆ ಬೇಕಾದರೆ ಬೆಣ್ಣೆ ಕಡಿಯಬಹುದು ಎಂಬಂತೆ ಸೂಚನೆ ಮಾಡಿದ್ದ. ತಾಯಿ ಯಶೋದಾ ಕೂಡಲೇ ಅವನನ್ನು ಎತ್ತಿ ತನ್ನ ತೊಡೆಯಮೇಲೆ ಮಲಗಿಸಿಕೊಂಡು ಎದೆಹಾಲು ಕೊಟ್ಟಳು. ಇದ್ದಕ್ಕಿದ್ದ ಹಾಗೆಯೇ, ಅವಳು ಒಲೆಯಮೇಲೆ ಇಟ್ಟಿದ್ದ ಹಾಲು ಉಕ್ಕತೊಡಗಿತು. ಹಾಲು ಉಕ್ಕಿ ಹರಿಯುವುದನ್ನು ತಡೆಯಲು ತಾಯಿ ಯಶೋದಾ ಕೂಡಲೇ…


  • ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ
    ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಮಹಾರಾಜ ಪರೀಕ್ಷಿತನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಕಲಿಯುಗದ ಚಿಹ್ನೆಗಳು ಅವನ ರಾಜ್ಯದ ಗಡಿಯೊಳಕ್ಕೆ ನುಸುಳಿದವು. ಈ ಸಂಗತಿಯು ಪರೀಕ್ಷಿತನಿಗೆ ತಿಳಿದಾಗ ವಿಷಯ ಸಂತೋಷ ತರುವಂತಹದೆಂದು ಅವನಿಗನ್ನಿಸಲಿಲ್ಲ. ಇತ್ತ ಈ ಸಂಗತಿಯು ಅವನು ಯುದ್ಧಮಾಡಲಿಕ್ಕೆ ಒಂದು ಅವಕಾಶವನ್ನು ನೀಡಿತು. ಅವನು ತನ್ನ ಬಿಲ್ಲುಬಾಣಗಳನ್ನು ಕೈಗೆತ್ತಿಕೊಂಡು ಯುದ್ಧಕ್ಕೆ ಸಜ್ಜಾಗತೊಡಗಿದನು. ಜಗತ್ತನ್ನು ಗೆಲ್ಲಹೊರಟ ಪರೀಕ್ಷಿತನಿಗೆ ಹಾದಿಯಲ್ಲಿ ಕಲಿಪುರುಷನು ಕಂಡನು. ಇವನು ಶೂದ್ರರಿಗಿಂತ ಕೀಳಾದವನು. ಆದರೆ ರಾಜನಂತೆ ವೇಷಹಾಕಿಕೊಂಡಿದ್ದ. ಈ ಕಲಿಪುರುಷ ಒಂದು ಎತ್ತು ಹಾಗೂ ಒಂದು ಹಸುವಿನ ಕಾಲುಗಳಿಗೆ ಭಾರಿ ಪೆಟ್ಟು ಮಾಡಿದ್ದ.…


  • ಶ್ಯಮಂತಕ ಮಣಿಯ ಕಥೆ
    ಶ್ಯಮಂತಕ ಮಣಿಯ ಕಥೆ

    ರಾಜಾ ಸತ್ರಾಜಿತ ಸೂರ್ಯದೇವನ ಪರಮ ಭಕ್ತ. ಅತ್ಯಂತ ಅಪರೂಪವಾದ ಶ್ಯಮಂತಕ ಮಣಿಯನ್ನು ಆತ ಸೂರ್ಯದೇವನಿಂದ ಪಡೆದುಕೊಂಡ. ಆ ಮಣಿಯನ್ನು ಒಂದು ಸರಕ್ಕೆ ಕಟ್ಟಿಕೊಂಡು, ಸರವನ್ನು ಕುತ್ತಿಗೆಯಲ್ಲಿ ಧರಿಸಿಕೊಂಡ ಸತ್ರಾಜಿತ ರಾಜ ದ್ವಾರಕಾ ಪಟ್ಟಣಕ್ಕೆ ಪ್ರಯಾಣ ಮಾಡಿದ. ಇವನ ಪ್ರಜ್ವಲಿಸುವ ಹೊಳಪಿನ ವ್ಯಕ್ತಿತ್ವವನ್ನು ನೋಡಿ ಮಾರುಹೋದ ದ್ವಾರಕೆಯ ಜನರು, ಸೂರ್ಯದೇವನೇ ಬರುತ್ತಿದ್ದಾನೆ ಎಂದು ಭಾವಿಸಿದರು. ಶ್ರೀಕೃಷ್ಣನಿದ್ದಲ್ಲಿಗೆ ಹೋಗಿ, ಸ್ವತಃ ಸೂರ್ಯದೇವನೇ ನಿನ್ನನ್ನು ಕಾಣಲು ಬರುತ್ತಿದ್ದಾನೆ ಎಂದು ಹೇಳಿದರು. ಆದರೆ, ಹೀಗೆ ಬರುತ್ತಿರುವವನು ಸೂರ್ಯನಲ್ಲ, ಅವನು ಸತ್ರಾಜಿತರಾಜ, ಅವನು ಹೀಗೆ…


  • ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ
    ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೂದೇವಿಯ ಮಗ ನರಕಾಸುರ. ಅವನಿಗೆ ಭೌಮಾಸುರ ಎಂಬ ಹೆಸರೂ ಇತ್ತು. ವರುಣದೇವನ ಛತ್ರಿಯನ್ನು ಅದಿತಿದೇವಿಯ ಬೆಂಡೋಲೆಗಳನ್ನು ಮತ್ತು ಉಪದೇವತೆಗಳೆಲ್ಲರ ಕ್ರೀಡಾ ಪ್ರದೇಶವಾಗಿದ್ದ ಮಣಿ ಪರ್ವತವನ್ನೂ ಕದ್ದೊಯ್ದಿದ್ದ. ಇಂದ್ರದೇವ ದ್ವಾರಕೆಗೆ ಬಂದು ಈ ರಾಕ್ಷಸನ ದುರ್ನಡವಳಿಕೆಗಳನ್ನು ಶ್ರೀಕೃಷ್ಣನಿಗೆ ವಿವರಿಸಿದ. ರಾಣಿ ಸತ್ಯಭಾಮೆಯೊಂದಿಗೆ ಗರುಡನ ಮೇಲೆ ಕುಳಿತುಕೊಂಡು, ‍ಶ್ರೀ ಕೃಷ್ಣ ನರಕಾಸುರನ ರಾಜಧಾನಿಗೆ ಪ್ರಯಾಣ ಬೆಳೆಸಿದ. ನಗರದ ಹೊರಗೆ ಮೈದಾನದಲ್ಲಿ ತನ್ನನ್ನು ತಡೆದ ಮುರ ಎನ್ನುವ ರಾಕ್ಷಸನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಕೊಂದುಹಾಕಿದ. ಆಮೇಲೆ ಆ ಮುರನ ಏಳು…


  • ಮೊಳಕೆ ಕಟ್ಟಿದ ಕಾಳುಗಳ ವಿಶೇಷ ತಿನಿಸುಗಳು ಯಾವುದೇ ಕಾಳುಗಳು ಚೆನ್ನಾಗಿ ಮೊಳಕೆ ಕಟ್ಟಬೇಕಾದರೆ ಅವನ್ನು ಎರಡು ದಿನ ಹಿಂದೆಯೇ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಮಾರನೆಯ ದಿನ ರಾತ್ರಿ ನೀರಿನಿಂದ ಸೋಸಿ ತೆಗೆದು ಶುಚಿಯಾದ ಹತ್ತಿಬಟ್ಟೆಯಲ್ಲಿ ಹಾಕಿ ಯಾವುದಾದರೂ ಒಂದು ಪಾತ್ರೆಯಲ್ಲಿ ಗಟ್ಟಿಯಾಗಿ ಮುಚ್ಚಿಡಿ. ಚೆನ್ನಾಗಿ ಮೊಳಕೆ ಕಟ್ಟುತ್ತದೆ. ಮೊಳಕೆ ಪದಾರ್ಥಗಳನ್ನು ಮಾಡುವ ದಿನ, ಒಂದು ಗಂಟೆ ಮೊದಲೇ ಪಾತ್ರೆಯ ಮುಚ್ಚಳವನ್ನು ತೆಗೆದಿಡಿ. ಇದರಿಂದ ಇನ್ನೂ ಚೆನ್ನಾಗಿ ಮೊಳಕೆ ಬರುತ್ತದೆ. ಮೊಳಕೆ ಕಾಳುಗಳ ಚಾಟ್ ಬೇಕಾಗುವ ಪದಾರ್ಥಗಳು…


  • ದಕ್ಷಿಣ ಕನ್ನಡದ ಶ್ರೀರಾಮನವಮಿ ವಿಶೇಷ ಪಾನಕಗಳು ಬಿಸಿಲ ಕೆಂಪಿಗೆ ತಂಪು ಪಾನೀಯಗಳು ಭಾರತದಾದ್ಯಂತ ಚೈತ್ರ ಶುಕ್ಲ ಪಕ್ಷದ ಒಂಭತ್ತನೆಯ ದಿನ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಅಂದು ಪೂಜಾ ಸಮಯದಲ್ಲಿ ವಿಶೇಷವಾಗಿ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ಶ್ರೀರಾಮನಿಗರ್ಪಿಸಿ ಪ್ರಸಾದರೂಪವಾಗಿ ಸ್ವೀಕರಿಸುತ್ತಾರೆ. ಇಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಮಾಡುವ ವಿಶೇಷ ಪಾನಕ, ಮಜ್ಜಿಗೆಯನ್ನು ಈ ಸಂಚಿಕೆಯಲ್ಲಿ ಕೊಡಲಾಗಿದೆ. ತಮಗಿಷ್ಟ ಇರುವ ಯಾವುದೇ ಪಾನಕವನ್ನು ಮಾಡಿ ಸ್ವೀಕರಿಸಿ. ಇದನ್ನು ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ಇತರೇ ದಿನಗಳಲ್ಲಿ ಬಿಸಿಲಿನ ಬೇಗೆಯಲ್ಲಿ…


ಪುಣ್ಯ ಕ್ಷೇತ್ರ

  • ಶ್ರೀ ನೀರಾ ನರಸಿಂಹ ಕ್ಷೇತ್ರ

    ಶ್ರೀ ನೀರಾ ನರಸಿಂಹ ಕ್ಷೇತ್ರ

    ಕೃಷ್ಣಾ ನದಿಯ ದಂಡೆಗುಂಟ ಅನೇಕ ನರಸಿಂಹ ಕ್ಷೇತ್ರಗಳಿವೆ. ಆಂ‍ಧ್ರಪ್ರದೇಶದ ಧರ್ಮಪುರಿ, ಗೋದಾವರಿ ತೀರದಲ್ಲಿರುವ ಮುದಗಲ್‌, ರಾಕ್ಷಸಭವನ ರಾಹೇರ, ನಾಂದೇಡ, ಭೀಮಾ ಹಾಗೂ ನೀರಾ ನದಿಯ ಸಂಗಮದಲ್ಲಿರುವ ನರಸಿಂಹಪುರ, ಕೃಷ್ಣಾ ದಂಡೆಯಲ್ಲಿಯ ಶೂರ್ಪಾಲಿ, ವಿಜಾಪುರದ ಹತ್ತಿರದಲ್ಲಿರುವ ತೊರವೆ, ಮುಳಬಾಗಿಲು, ಮೇಲುಕೋಟೆ ಮೊದಲಾದ ಸ್ಥಳಗಳಲ್ಲಿರುವ ನರಸಿಂಹದೇವನ ಭಕ್ತರ ಸಂಖ್ಯೆ ಅಪಾರವಾಗಿದೆ. ಮಹಾರಾಷ್ಟ್ರದ ಪ್ರಾ‍‍ಧ್ಯಾಪಕ ಸುರು ಅವರು ತಮ್ಮ ಗ್ರಂಥದಲ್ಲಿ ಭೀಮಾ ಹಾಗೂ ನೀರಾ ನದಿಗಳ ಸಂಗಮ ಸ್ಥಾನದಲ್ಲಿರುವ ಕ್ಷೇತ್ರಗಳ ಬಗ್ಗೆ ಮಾಹಿತಿಗಳನ್ನೊದಗಿಸಿದ್ದಾರೆ. ನೀರಾ ನದಿಯ ದಂಡೆಯ ಮೇಲಿರುವ ಲಕ್ಷ್ಮೀತೀರ್ಥ, ಪದ್ಮತೀರ್ಥ,…


  • ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

    ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

    -ಕೆ.ವಿ.ಪದ್ಮಾವತಿ ಪರತತ್ತ್ವದಲ್ಲಿ ನಂಬಿಕೆ, ಸಚ್ಛಾಸ್ತ್ರದಲ್ಲಿ ಅರಿವು, ಸಾಧನೆಯಲ್ಲಿ ಪ್ರಗತಿ, ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಪಾಪ-ತಾಪಗಳನ್ನು ಎಳೆದು ಹಾಕುವ ಭಕ್ತರ ತನುಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸಂತಸದ ನೆಲೆಯಾದ ಕಾಕೋಳು ಕೃಷ್ಣನ ಸಾನ್ನಿಧ್ಯಕ್ಕೆ ಬನ್ನಿ… ಮಂಗಳಮೂರ್ತಿಯ ದರುಶನ, ನಮಿಸಿದ ಶಿರಕರಗಳು ಪರಮ ಪಾವನ, ಇದುವೇ ಜೀವನದ ಧನ್ಯತೆಗೊಂದು ಅಪೂರ್ವ ಆಹ್ವಾನ, ಬೇಡವೇ ನಿಮಗೆ ಈ ರಸದೌತಣ, ಇನ್ನೇಕೆ ಆಗಮನಕ್ಕೆ ನಿಧಾನ? ಇಲ್ಲಿ ಆದರವಿದೆ, ಸಂತಸವಿದೆ, ಭಕ್ತಿಯಹೊನಲಿದೆ, ನಿತ್ಯನೋಟದ ಶಾಂತಿ ಇದೆ. ನಾದಲೋಲ ವೇಣುಗೋಪಾಲನ ಸನ್ನಿಧಾನದಲ್ಲಿ…


ಪುರಾಣ ಕಥೆ

ಸಂಪಾದಕೀಯ

ಮುಂಬರುವ ಕಾರ್ಯಕ್ರಮಗಳು

ವಿಡಿಯೋ





ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि नीयते

दाने नैव क्षयं याति विद्यारत्नं महाधनम्

ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.

ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.

ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.