ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್‌ ಟು ಗಾಡ್ ಹೆಡ್‌ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್‌ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.

ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

  • ಧರ್ಮದ ನೆಲೆ

    ಗುರು-ಮುಖ-ಪದ್ಮ-ವಾಕ್ಯ

    ಧರ್ಮದ ನೆಲೆ

    ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ. ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ…


ಸುದ್ದಿಮನೆ

  • ಸಾಕ್ಷಿ ಗೋಪಾಲ

    ಸಾಕ್ಷಿ ಗೋಪಾಲ

    -ಡಾ.ಎನ್‌.ಕೆ.ರಾಮಶೇಷನ್‌ ಇಡೀ ಜಗತ್ತಿಗೆ ಭಾರತದ ಅದ್ವಿತೀಯ ಕೊಡುಗೆ – ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರ ನಾಮಾದಿ ಅನೇಕ ಸ್ತೋತ್ರಗಳು, ಭಾಗವತ, ಇತ್ಯಾದಿ ಇತ್ಯಾದಿ. ಭಕ್ತಿ ರಸಸ್ವರದಿ ಭಾಗವತ ಗ್ರಂಥ ಉನ್ನತಿಯನ್ನು ಮೆರೆಸುವ ಭಕ್ತಿ ಕಾವ್ಯ ಕೂಡ ಆಗಬಲ್ಲುದು. ಶ್ರೀ ಮನ್ಮಹಾವಿಷ್ಣುವಿನ, ಶ್ರೀ ಕೃಷ್ಣನ, ದಿವ್ಯವಾದ ಕಥೆ-ಸ್ತುತಿ, ಕುರಿತಂತೆ ಶ್ರವಣ (ಆಲಿಸುವುದು) ಸ್ಮರಣಂ (ನೆನಪು ಮಾಡಿಕೊಳ್ಳುವುದು), ಕೀರ್ತನಂ (ಭಗವಂತನ ಗುಣಗಾನ), ದೇವ ದೇವೋತ್ತಮನನ್ನು ಅಚಲವಾಗಿ ಸೇವಿಸುವುದು, (ಪಾದ ಸೇವನ), ಆತನನ್ನು ಅರ್ಚಿಸುವುದು, ಪೂಜಿಸುವುದು (ಅರ್ಚನ), ಆತನಿಗೆ…


  • ಶ್ರೀ ಮಾಧವ ತೀರ್ಥ
    ಶ್ರೀ ಮಾಧವ ತೀರ್ಥ

    ಮಧ್ವಾಚಾರ್ಯರ ನಾಲ್ವರು ಪ್ರಮುಖ ಅನುಯಾಯಿಗಳ ಪೈಕಿ ಶ್ರೀ ಮಾಧವ ತೀರ್ಥರೂ ಒಬ್ಬರು. ಶ್ರೀ ಮಧ್ವಾಚಾರ್ಯರ ನಂತರ ಕ್ರಮವಾಗಿ ಪದ್ಮನಾಭ ತೀರ್ಥ,  ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯ ತೀರ್ಥರು ಪೀಠವನ್ನು ಅಲಂಕರಿಸಿದರು. ಚತುವೇರ್ದಗಳ ಮೇಲೆ ವಿದ್ವತ್‌ಪೂರ್ಣ ವ್ಯಾಖ್ಯಾನವನ್ನು ರಚಿಸಿದ್ದು ಮಾಧವ ತೀರ್ಥರ ಅತಿ ಮುಖ್ಯ ಸಾಧನೆ. ಆಂಧ್ರಪ್ರದೇಶದಲ್ಲಿ ಪವಿತ್ರ ಗೋದಾವರಿ ನದಿ ತೀರದ ಹಳ್ಳಿಯೊಂದರಲ್ಲಿ, ಆ ಕಾಲದ ಮಹಾನ್‌ ವಿದ್ವಾಂಸ ಕೃಷ್ಣಶಾಸ್ತ್ರಿ ಎಂಬ ಬ್ರಾಹ್ಮಣರ ಪುತ್ರನಾಗಿ ಮಾಧವ ತೀರ್ಥರ ಜನನವಾಯಿತು. ಇದಕ್ಕೂ ಮೊದಲು ಪದ್ಮನಾಭ ತೀರ್ಥರೂ…


  • ಶ್ರೀರಾಮ ಕ್ಷೇತ್ರಗಳು
    ಶ್ರೀರಾಮ ಕ್ಷೇತ್ರಗಳು

    ಭಾರತದ ಯಾವ ಭಾಗಕ್ಕೇ ಹೋದರು, ಅಲ್ಲಿ ಒಂದಲ್ಲಾ ಒಂದು ರಾಮನ ಸಂಬಂಧ ಕ್ಷೇತ್ರವೆಂದು ಜನ ಹೇಳುತ್ತಾರೆ. ಸೀತೆಯ ಸೆರಗು ತಾಕಿದ ಜಾಗವೆಂದೂ, ಹನುಮಂತನು ಬಂದಿದ್ದನೆಂದೋ, ರಾಮ ಬಾಣ ಬಿಟ್ಟ ಸ್ಥಳವೆಂದೋ, ಏನೋ ಸಂಬಂಧ ಹೇಳಿಕೊಳ್ಳುತ್ತಾರೆ. ಶತಮಾನಗಳಿಂದ ಪ್ರಸಿದ್ಧವಾಗಿರುವ ಹಲವು ಕ್ಷೇತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಅಯೋಧ್ಯೆ: ಈಗಿನ ಉತ್ತರ ಪ್ರದೇಶದ ಫೈಜಿಯಾಬಾದ್‌ ಜಿಲ್ಲೆಯಲ್ಲಿದೆ. ಪವಿತ್ರ ಸರಯೂ ನದಿ ಇಲ್ಲಿ ಹರಿಯುತ್ತದೆ. ರಘುವಂಶದರಸರ ರಾಜಧಾನಿ. ರಾಮನ ಜನ್ಮಸ್ಥಳ. ನೂರಾರು ದೇವಾಲಯಗಳಿವೆ. ಭಾರತದ ಪುರಾತನವಾದ 7 ಮೋಕ್ಷ ನಗರಿಗಳಲ್ಲಿ ಅಯೋಧ್ಯೆ…


  • ರಾಧಾಕುಂಡ ಮತ್ತು ಗೋವರ್ಧನ
    ರಾಧಾಕುಂಡ ಮತ್ತು ಗೋವರ್ಧನ

    ವ್ರಜಮಂಡಲ ಪರಿಕ್ರಮ- ಭಾಗ:6 -ಕೃಷ್ಣದಾಸ ರಾಧಾ ಕುಂಡ: ಮಥುರಾದಿಂದ 26 ಕಿ.ಮೀ ದೂರದಲ್ಲಿ ರಾಧಾ ಕುಂಡವಿದೆ. ಅತ್ಯಂತ ಪ್ರಶಾಂತ ಮತ್ತು ಮನೋಹರ ತಾಣವಿದು. ಗೌಡೀಯ ವೈಷ್ಣವರ ಪಾಲಿಗೆ ವ್ರಜ ಪ್ರದೇಶದಲ್ಲೇ ಅತ್ಯಂತ ಪವಿತ್ರ ತಾಣ ಇದಾಗಿತ್ತು. ಇಲ್ಲಿ ಎರಡು ಪವಿತ್ರ ಕೊಳಗಳಿವೆ. ಈ ಸ್ಥಳವಿರುವ ಪಟ್ಟಣವನ್ನು ಅರಿಷ್ಟವನ ಎಂದು ಕರೆಯಲಾಗುತ್ತದೆ. ಅರಿಷ್ಟಾಸುರ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ದು ಇಲ್ಲೇ. ರಾಧಾಕೃಷ್ಣರು ದಿನದ ವೇಳೆ ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದುದು ಇಲ್ಲೇ. ಬಹಳ ವರ್ಷಗಳ ತನಕ ಈ ಪ್ರದೇಶಗಳ ಬಗ್ಗೆ ಯಾರಿಗೂ…


  • ಭಗವದ್ಗೀತೆಯ ಇತಿಹಾಸ
    ಭಗವದ್ಗೀತೆಯ ಇತಿಹಾಸ

    ಶ್ರೀಮತಿ ಪದ್ಮಿನಿ ಬಾಲು ಮಾನವನು ಭೌದ್ಧಿಕವಾಗಿ ಮುಂದುವರೆಯುತ್ತಿರುವೆನೆಂದು ಭಾವಿಸುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ಯಾವುದನ್ನೇ ಆಗಲಿ, “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡು” ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ನಂತರವೇ ಯಾವ ಸತ್ಯವನ್ನಾದರೂ ಒಪ್ಪಿಕೊಳ್ಳಬೇಕೆಂದು ವಾದ ಮಾಡುವ ಜನರಿಗೆ ಶ್ರೀಲ ಪ್ರಭುಪಾದರು “ಶ್ರೀ ಮದ್ಭಗವದ್ಗೀತಾ ಯಥಾರೂಪ” ಮುಂತಾದ ಅಸಂಖ್ಯಾತ ಗ್ರಂಥಗಳಲ್ಲಿ ತಮ್ಮ ವ್ಯಾಖ್ಯಾನಗಳ ಮೂಲಕ ಸದುತ್ತರವನ್ನಿದ್ದಾರೆ. ಕುರುಕ್ಷೇತ್ರ ಯುದ್ಧವು ನಿಜವಾಗಿ ನಡೆದಿರಬಹುದೇ, ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಮಾನವ ಕುಲಕ್ಕೆ…


ಮಕ್ಕಳ ಕಥೆ

  • ಧ್ರುವ ಮಹಾರಾಜ
    ಧ್ರುವ ಮಹಾರಾಜ

    ಸ್ವಾಯಂಭುವ ಮನುವಿನ ಮಗ ರಾಜಾ ಉತ್ತಾನಪಾದನಿಗೆ ಸುನೀತಿ ಹಾಗೂ ಸುರುಚಿ ಎನ್ನುವ ಹೆಸರಿನ ಇಬ್ಬರು ರಾಣಿಯರಿದ್ದರು. ಸುರುಚಿಯು ರಾಜನಿಗೆ ಹೆಚ್ಚು ಪ್ರಿಯವಾಗಿದ್ದಳು. ಧ್ರುವ ಎನ್ನುವ ಹೆಸರಿನ ಪುತ್ರನನ್ನು ಪಡೆದಿದ್ದ ಸುನೀತಿ ಎಂದರೆ ರಾಜನಿಗೆ ಅಷ್ಟಕಷ್ಟೆ. ಒಂದು ದಿನ ಉತ್ತಾನಪಾದ ರಾಜನು ಸುರುಚಿಯ ಮಗನಾದ ಉತ್ತಮನನ್ನು ತೊಡೆಯಮೇಲೆ ಕುಳ್ಳಿರಿಸಿಕೊ೦ಡು ಮುದ್ದಾಡುತ್ತಿದ್ದನು. ಧ್ರುವನು ತಾನೂ ತಂದೆಯ ತೊಡೆಯನ್ನೇರಲು ಹೋದನು. ಇದನ್ನು ನೋಡಿದ ಅವನ ಮಲತಾಯಿ ಸುರುಚಿಗೆ ವಿಪರೀತ ಹೊಟ್ಟೆಕಿಚ್ಚು ಹುಟ್ಟಿತು. ಆಗ ಆಕೆ ಸಿಟ್ಟಿನಿಂದ ಧ್ರುವನನ್ನು ಬೈದಳು. ತನ್ನ ಮಲತಾಯಿಯು…


  • ಅರಿಷ್ಟಾಸುರ ವಧೆ
    ಅರಿಷ್ಟಾಸುರ ವಧೆ

    ಬಾಲಕೃಷ್ಣ ದಿನಕ್ಕೊಂದು ದಿವ್ಯ ಲೀಲೆ ಪ್ರದರ್ಶಿಸುತ್ತಾ ಇಡೀ ವೃಂದಾವನವನ್ನು ತನ್ನ ಜಾಲದಲ್ಲಿ ಬಂಧಿಸಿದ್ದ. ಇಡೀ ವೃಂದಾವನ ಕೃಷ್ಣಮಯ. ಎಲ್ಲಿ ನೋಡಿದರೂ ತುಂಟ ಕೃಷ್ಣ ಮತ್ತು ಅವನ ಹಿಂಬಾಲಕ ಗೋಪಾಲಕರ ಕೇಕೆ. ಗೋಪಿಕೆಯರ ಕಿಲಕಿಲ. ಹಸುಕರುಗಳ ಕೊರಳ ಗಂಟೆ ನಾದ. ಮೋಹನಮುರಳಿಯ ಮಂಜುಳ ನಿನಾದ. ಹೀಗೆ ವೃಂದಾವನ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ನೋಡಿ ನಲಿಯುತ್ತಾ ಸಂತಸದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಬಾಲಕೃಷ್ಣನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ರಾಕ್ಷಸ ಗಣ ದಿನಕ್ಕೊಂದು ತಂತ್ರ ಹಣೆಯುತ್ತಲೇ ಇತ್ತು. ಇಂಥ ಒಂದು ಷಡ್ಯಂತ್ರದ…


  • ಮಹಾಮೂರ್ಖನ ತಲೆಗೆ ಟೋಪಿ
    ಮಹಾಮೂರ್ಖನ ತಲೆಗೆ ಟೋಪಿ

    ಸಂಸ್ಕೃತ ಮೂಲ – ಡಾ. ಜನಾರ್ದನ ಹೆಗಡೆ, ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಹಿಂದೆ ಧ್ಯಾನಚಂದ ಎಂಬ ಒಬ್ಬ ವ್ಯಾಪಾರಿ ಇದ್ದನು. ಅವನು ದೊಡ್ಡ ಭಗವದ್ಭಕ್ತನಾಗಿದ್ದನು. ಅವನು ಪ್ರತಿದಿನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ದೇವರ ಪೂಜೆ ಮಾಡಿ ಅಂಗಡಿಗೆ ಹೋಗುತ್ತಿದ್ದ. ಮಧ್ಯಾಹ್ನದವರೆಗೆ ಅಂಗಡಿ ನಡೆಸುತ್ತಿದ್ದ. ಅನಂತರದ ಕಾಲ ಧ್ಯಾನ, ಭಗವತ್ ಕಾರ್ಯಾದಿಗಳಲ್ಲಿ ಕಳೆಯುತ್ತಿದ್ದನು. ಒಮ್ಮೆ ನಗರದ ಮಹಾಧನಿಕನಾದ ಲಕ್ಷ್ಮೀಪತಿ ಎಂಬುವನು ಧ್ಯಾನಚಂದನನ್ನು ತನ್ನ ಮನೆಗೆ ಕರೆಸಿ ಅವನ ತಲೆಗೆ ಒಂದು ಟೋಪಿ ತೊಡಿಸಿ ಹೇಳಿದ, “ಮಹಾಮೂರ್ಖನಿಗೆ…


  • ಗಡಿಗೆಯೊಳಗಿನ ಗುಮ್ಮ!
    ಗಡಿಗೆಯೊಳಗಿನ ಗುಮ್ಮ!

    -ಶ್ರೀಮತಿ ಪದ್ಮಿನಿ ಬಾಲು ಪೂರ್ವ ದಿಗಂತದಲ್ಲಿ ಸೂರ್ಯನು ಇಣುಕಿ ನೋಡುವ ಸನ್ನಾಹ ನಡೆಸುತ್ತಿದ್ದ. ಅರುಣ ಕಿರಣಗಳು ಭೂಮಿಯ ಮೇಲಿನ ಅಚರ ಚರಾದಿ ವಸ್ತುಗಳಿಗೆಲ್ಲ ಚಿನ್ನದ ಮೆರುಗನ್ನು ಲೇಪಿಸುತ್ತಿದ್ದವು. ಒಂಟಿಕಾಲಿನಲ್ಲಿ ನಿಂತು ಕಣ್ಣುಮುಚ್ಚಿ ತಪೋನಿರತರಾದ ಋಷಿಗಳನ್ನು ನೆನಪಿಸುತ್ತಿದ್ದ ಕೋಳಿಗಳು ಕೋ, ಕ್ಕೋ ಎಂದವು. ನಂದಗೋಕುಲದಲ್ಲಿ ಗೋಪಿಯರು ನಿದ್ದೆಯಿಂದೆದ್ದು ಮೈಮುರಿದು, ಆಕಳಿಸಿ ಕೃಷ್ಣಾ ಎಂದು ಕೈಮುಗಿದರು. ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ ಮಿಂದು ನೀರು ತರಲೆಂದು ಕೊಡಗಳನ್ನೆತ್ತಿಕೊಂಡು ಮನೆಯಿಂದ ಹೊರಬಂದರು. ಗೋಪಾಲಕರು ಹೊದಿಕೆಯನ್ನು ಕೆಡವಿ ಎದ್ದು ತಮ್ಮ ತಾಯಂದಿರಿಗೂ ಮಿಗಿಲಾದ ಗೋಮಾತೆಯ…


  • ಪಾನಕ ಬೆಲ್ಲದ ಹುಡಿಯನ್ನು ನೀರಿನಲ್ಲಿ ಬೆರೆಸಿ, ಸಂಪೂರ್ಣವಾಗಿ ಕರಗಿಸಿ. ಮಿಶ್ರಣವನ್ನು ಶುಭ್ರವಾದ ಬಟ್ಟೆಯಲ್ಲಿ ಸೋಸಿ. ಅದಕ್ಕೆ ಲಿಂಬೆ ರಸ, ಒಣ ಶುಂಠಿ ಹುಡಿ, ಏಲಕ್ಕಿ, ಕಾಳು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ. ತಣ್ಣಗಿನ ರುಚಿ ರುಚಿ ಪಾನಕವನ್ನು ಎಲ್ಲರಿಗೂ ಹಂಚಿ. ಪಾಲನಕದ ವಿಶೇಷವೆಂದರೆ ಇದನ್ನು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಾಗೂ ಅತಿಥಿಗಳನ್ನು ಸ್ವಾಗತಿಸುವ ಪೇಯವಾಗಿ ನೀಡಬಹುದು. ದಾಹ ತಣಿಸಿ, ದಣಿವು ನಿವಾರಿಸಿ ದೈಹಿಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಈ ಪಾನಕಕ್ಕಿದೆ. ಮಸಾಲೆ-ಹುಣಸೆ ಪಾನಕ ಒಂದು ಅಗಲವಾದ…


  • ಈ ಸಿಹಿ ತಿಂಡಿಯ ವಿಶೇಷ ಏನಪ್ಪಾ ಅಂದರೆ, ಕೊಬ್ಬಿನ ಅಂಶ ಹೆಚ್ಚಿರುವುದಿಲ್ಲ. ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಂದು ಕಡಾಯಿಯಲ್ಲಿ ಹಾಕಿ ಚೆನ್ನಾಗಿ ಕಲಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಮೊಗಚೆಕೈಯಿಂದ ನಿಧಾನವಾಗಿ ಕೈಯಾಡಿಸುತ್ತಲೇ ಇರಿ. 10-15 ನಿಮಿಷಗಳ ನಂತರ ಪಾತ್ರೆಯ ತಳದಿಂದ ಪಾಕ ಬಿಟ್ಟುಕೊಂಡು ಹೊರಬರವುದನ್ನು ನೋಡುವಿರಿ. ಪಾಕ ಹದಕ್ಕೆ ಬಂದನಂತರ ಘಂ ಅಂತ ಪರಿಮಳ ಮನೆಯಲ್ಲಾ ಹರಡುತ್ತದೆ. ಆಗ ಕಡಾಯಿಯನ್ನು ಇಳಿಸಿ. ಒಂದು ಅಗಲವಾದ, ಜಿಡ್ಡು ಸವರಿದ ಸಮತಟ್ಟಾದ ತಟ್ಟೆಗೆ ಸುರಿಯಿರಿ. ಈಗ ಚಾಕುಗೆ…


ಪುಣ್ಯ ಕ್ಷೇತ್ರ

  • ಮಥುರಾದ ಪವಿತ್ರ ತಾಣಗಳು

    ಮಥುರಾದ ಪವಿತ್ರ ತಾಣಗಳು

    ವ್ರಜ ಮಂಡಲ ಪರಿಕ್ರಮ -ಕೃಷ್ಣದಾಸ ಶ್ರೀ ಕೃಷ್ಣ ಜನ್ಮಸ್ಥಾನ ಇದು ಶ್ರೀ ಕೃಷ್ಣ ಜನಿಸಿದ ಪ್ರದೇಶ, ಇಲ್ಲಿನ ಕೇಶವ ದೇವ ದೇವಾಲಯದಲ್ಲಿ ರಾಧಾರಾಣಿ ಮತ್ತು ಕೇಶವ ವಿಗ್ರಹಗಳಿವೆ. ವ್ರಜ ಮಂಡಲದ ನಾಲ್ಕು ಪ್ರಮುಖ ವಿಗ್ರಹಗಳಲ್ಲಿ ಕೇಶವ ವಿಗ್ರಹವೂ ಒಂದು. ಇದನ್ನೂ ಕೂಡಾ ವಜ್ರನಾಭ ಪ್ರತಿಷ್ಠಾಪಿಸಿದ. ಶ್ರೀ ಕೃಷ್ಣ ಅವತರಿಸಿದ ಸ್ಥಳ ಕೇಶವ ದೇವ ದೇವಾಲಯದ ಪಕ್ಕದಲ್ಲಿ ಜೈಲಿನಂಥ ಒಂದು ಚಿಕ್ಕ ಕೊಠಡಿ ಇದೆ. ಶ್ರೀ ಕೃಷ್ಣ ಜನಿಸಿದ್ದು ಇದೇ ಜೈಲಿನಲ್ಲಿ ಎನ್ನಲಾಗಿದೆ. ಇಲ್ಲಿಂದ 250 ಅಡಿ ದೂರದಲ್ಲಿ,…


  • ಶ್ರೀರಂಗ – ವೈಷ್ಣವ ವೈಭವ

    ಶ್ರೀರಂಗ – ವೈಷ್ಣವ ವೈಭವ

    -ಶ್ರೀ ಶ್ರೀವತ್ಸ ಭಾರತ ಸಂತರ ಹಾಗೂ ದೇವಾಲಯಗಳ ನಾಡು. ಪ್ರಾಯಶಃ ಪ್ರಪಂಚದ ಯಾವ ದೇಶದಲ್ಲೂ ಇಲ್ಲದಷ್ಟು ದೇವಾಲಯಗಳು, ಭಾರತದಲ್ಲಿವೆ ಎಂದು ಹೇಳಿದರೆ ತಪ್ಪಾಗಲಾರದು. ದೇವಾಲಯಗಳನ್ನು ಸಂದರ್ಶಿಸುವುದು, ಅಲ್ಲಿ ಸ್ಥಾಪಿಸಿರುವ ಮೂರ್ತಿಗಳನ್ನು ಪೂಜಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇವಾಲಯಗಳಲ್ಲಿ ಪರಮಾತ್ಮನನ್ನು ಪೂಜಿಸುವುದು ಯಾವ ರೀತಿಯಲ್ಲೂ ಕೆಳಸ್ತರದ ಪೂಜೆಯಲ್ಲ. ಆಗಮಶಾಸ್ತ್ರಗಳನ್ನನುಸರಿಸಿ ದೇವಾಲಯಗಳಲ್ಲಿ ನಡೆಯುವ ಪೂಜಾ ವಿಧಿಗಳಲ್ಲಿ ಭಾಗವಹಿಸುವುದು ಪರಮ ದೇವೋತ್ತಮ ಪುರುಷನಿಗೆ ನಮ್ಮ ಭಕ್ತಿಯನ್ನು ತೋರುವ ದ್ಯೋತಕವಾಗಿದೆ. ಶ್ರೀ ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ಶ್ರೀರಂಗ ಕ್ಷೇತ್ರ ಅತ್ಯಂತ ಹೆಚ್ಚಿನ ಹಿರಿಮೆಯನ್ನು ಪಡೆದಿದೆ.…


ಪುರಾಣ ಕಥೆ

ಸಂಪಾದಕೀಯ

ಮುಂಬರುವ ಕಾರ್ಯಕ್ರಮಗಳು

ವಿಡಿಯೋ





ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि नीयते

दाने नैव क्षयं याति विद्यारत्नं महाधनम्

ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.

ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.

ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.